Telegram Join My Telegram WhatsApp Join My WhatsApp

ಮತದಾರರ ಗುರುತಿನ ಚೀಟಿ ತಿದ್ದುಪಡಿ 2026 | ಹೆಸರು, ವಿಳಾಸ ಬದಲಾವಣೆ

ಭಾರತೀಯ ಪ್ರಜೆಗೆ ಮತದಾರ ಗುರುತಿನ ಕಾರ್ಡ್ ಅತೀ ಮುಖ್ಯ. ನಿಮ್ಮ ಮತದಾನದ ಹಕ್ಕು ಚಲಾಯಿಸಲು

ಬೇಕೆ ಬೇಕು. ಹಾಗೆ ಮತದಾರ ಕಾರ್ಡ್ ನಲ್ಲಿ ಹೆಸರು ಜನ್ಮ ದಿನಾಂಕ ವಿಳಾಸ ಕೆಲವರಿಗೆ ಬದಲಾಯಿಸುವ ಅಗತ್ಯ ಇರುತ್ತೆ.

ಅದು ಸಂಪೂರ್ಣ ಆನ್ಲೈನ್ ಅಥವಾ ಆಫ್ಲೈನ್ ಎರಡು ವಿಧಗಳಲ್ಲಿ ಮಾಡಬಹುದು. ಬನ್ನಿ ಹೇಗೆಂದು ತಿಳಿಯೋಣ.

ಮತದಾರರ ಗುರುತಿನ ಚೀಟಿ ಎಂದರೇನು?

ಮತದಾರರ ಗುರುತಿನ ಚೀಟಿ (EPIC – Elector Photo Identity Card) ಭಾರತದ ಚುನಾವಣಾ ಆಯೋಗದಿಂದ ನೀಡಲಾಗುವ ಅಧಿಕೃತ ಗುರುತಿನ ಚೀಟಿಯಾಗಿದೆ. ಇದು ಚುನಾವಣೆಯಲ್ಲಿ ಮತ ಚಲಾಯಿಸಲು ಮಾತ್ರವಲ್ಲದೆ ಅನೇಕ ಸರ್ಕಾರಿ ಹಾಗೂ ಖಾಸಗಿ ಸೇವೆಗಳಲ್ಲಿ ಗುರುತಿನ ದಾಖಲೆಯಾಗಿ ಬಳಸಲಾಗುತ್ತದೆ.

ಯಾವ ಸಂದರ್ಭಗಳಲ್ಲಿ ತಿದ್ದುಪಡಿ ಮಾಡಬೇಕು?

ಈ ಕೆಳಗಿನ ಮಾಹಿತಿಗಳಲ್ಲಿ ತಪ್ಪಿದ್ದರೆ ತಿದ್ದುಪಡಿ ಮಾಡಬಹುದು.

  • ಹೆಸರು ತಪ್ಪಿದ್ದರೆ
  • ಕನ್ನಡ ಅಥವಾ ಇಂಗ್ಲಿಷ್ ಸ್ಪೆಲ್ಲಿಂಗ್ ತಪ್ಪಿದ್ದರೆ
  • ವಿಳಾಸ ಬದಲಾಗಿದ್ದರೆ
  • ಮದುವೆಯ ನಂತರ ಹೆಸರು ಬದಲಾಗಿದ್ದರೆ
  • ಜನ್ಮ ದಿನಾಂಕ ತಪ್ಪಿದ್ದರೆ
  • ಫೋಟೋ ಸ್ಪಷ್ಟವಾಗಿರದಿದ್ದರೆ
  • ಲಿಂಗ ಮಾಹಿತಿ ತಪ್ಪಿದ್ದರೆ
  • ಸಂಬಂಧಿಕರ ಹೆಸರು ತಪ್ಪಿದ್ದರೆ
ವೋಟರ್ ಐಡಿಗೆ ಅರ್ಜಿ ಮತ್ತು ತಿದ್ದುಪಡಿ ಹೇಗೆ?
  • ಹೊಸ ಅರ್ಜಿ: 18 ವರ್ಷ ತುಂಬಿದ ಭಾರತೀಯರು ಆನ್‌ಲೈನ್ ಮೂಲಕ ಅಧಿಕೃತ ವೆಬ್‌ಸೈಟ್  ಅಥವಾ ‘Voter Helpline’ ಆಪ್ ಬಳಸಿ ಹೊಸ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬಹುದು.
  • ವಿಳಾಸ ಬದಲಾವಣೆ ಹಾಗೂ ತಿದ್ದುಪಡಿ: ನಿಮ್ಮ ವೋಟರ್ ಐಡಿಯಲ್ಲಿ ಹೆಸರು, ವಿಳಾಸ ಅಥವಾ ಹುಟ್ಟಿದ ದಿನಾಂಕ ಬದಲಾಯಿಸಲು/ತಿದ್ದುಪಡಿ ಮಾಡಲು ಫಾರ್ಮ್ 8 ಅನ್ನು ಬಳಸಬಹುದು

ತಿದ್ದುಪಡಿ ಮಾಡಲು ಅಗತ್ಯ ದಾಖಲೆಗಳು

ಹೆಸರು ತಿದ್ದುಪಡಿ

  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • PAN ಕಾರ್ಡ್
  • SSLC ಅಂಕಪಟ್ಟಿ

ವಿಳಾಸ ಬದಲಾವಣೆ

  • ಆಧಾರ್ ಕಾರ್ಡ್
  • ವಿದ್ಯುತ್ ಬಿಲ್
  • ಬ್ಯಾಂಕ್ ಪಾಸ್‌ಬುಕ್
  • ಗ್ಯಾಸ್ ಬಿಲ್
  • ರೇಷನ್ ಕಾರ್ಡ್

ಜನ್ಮ ದಿನಾಂಕ

  • ಜನನ ಪ್ರಮಾಣಪತ್ರ
  • SSLC ಪ್ರಮಾಣಪತ್ರ
  • ಪಾಸ್‌ಪೋರ್ಟ್

ಫೋಟೋ

  • ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ

 

ಹಂತ 1

ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

WEBSITE LINK:  https://www.eci.gov.in/  Form 8 Select ಮಾಡಿ

 

ಆನ್‌ಲೈನ್‌ನಲ್ಲಿ ಮತದಾರರ ಗುರುತಿನ ಚೀಟಿ ತಿದ್ದುಪಡಿ ಮಾಡುವ ವಿಧಾನ

ಹಂತ 1

ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

WEBSITE LINK:  https://www.eci.gov.in/

 

ಹಂತ 2

ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಮಾಡಿ. ಇ ಮೊಬೈಲ್ ನುಂಬರ್ ಗೆ ಓ‌ಟಿ‌ಪಿ ಬರುತ್ತದೆ. ರೀಛಾರ್ಜ್ ಇದೆಯೋ ಇಲ್ಲವೋ ಚೆಕ್ ಮಾಡಿ ಕೊಳ್ಳಿ

ಹಂತ 3

Correction in Electoral Roll (Form 8) ಆಯ್ಕೆಮಾಡಿ.

ಇಲ್ಲಿ ಬೇರೆ ಬೇರೆ ಫಾಮ್ ನಂಬರ್ ಇರುತ್ತವೆ. CORRECTION ಗಾಗಿ FORM 8 SELECT ಮಾಡಿ.

ಹಂತ 4

EPIC ಸಂಖ್ಯೆಯನ್ನು ನಮೂದಿಸಿ.

ಹಂತ 5

ತಿದ್ದುಪಡಿ ಮಾಡಬೇಕಾದ ಮಾಹಿತಿಯನ್ನು ಆಯ್ಕೆಮಾಡಿ.

ಹಂತ 6

ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

ಹಂತ 7

ಅರ್ಜಿಯನ್ನು ಸಲ್ಲಿಸಿ. ಆಧಾರ್ ನಂಬರ್ ಗೆ ಓ‌ಟಿ‌ಪಿ ಬರುವುದು NIVU OTP HAAKI VERIFIY MADIDARE

NIMMA ಈ SIGN ಆದ HAAGE ಇದರಿಂದ ಪ್ರಕ್ರಿಯೆ ಬೇಗ ಮುಗಿಯುತ್ತದೆ.

ಹಂತ 8

Reference Number ಅನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಿ.

 

ಆಫ್‌ಲೈನ್‌ನಲ್ಲಿ ತಿದ್ದುಪಡಿ ಮಾಡುವ ವಿಧಾನ

ನಿಮ್ಮ ಕ್ಷೇತ್ರದ

  • BLO (Booth Level Officer)
  • ತಾಲೂಕು ಕಚೇರಿ
  • ಚುನಾವಣಾ ನೋಂದಣಿ ಅಧಿಕಾರಿ (ERO)

ಇವರನ್ನು ಸಂಪರ್ಕಿಸಿ Form 8 ಭರ್ತಿ ಮಾಡಿ ಸಲ್ಲಿಸಬಹುದು.

BLO ಯಾರು ಅಂತ ತಿಳಿಯಲು ಅಂಗನವಾಡಿ ಅಥವಾ ಹತ್ತಿರದ ಸರ್ಕಾರಿ ಶಾಲೆಗೆ ಭೇಟಿ ನೀಡಿ

ನಿಮ್ಮ ಏರಿಯಾ ದ BLO ಯಾರು ಅಂತ ಗೊತ್ತಾಗುತ್ತೆ

ಯಾವ ಮಾಹಿತಿಗಳನ್ನು ತಿದ್ದುಪಡಿ ಮಾಡಬಹುದು?

ತಿದ್ದುಪಡಿ ಸಾಧ್ಯವೇ?
ಹೆಸರು ✅ ಹೌದು
ವಿಳಾಸ ✅ ಹೌದು
ಫೋಟೋ ✅ ಹೌದು
ಜನ್ಮ ದಿನಾಂಕ ✅ ಹೌದು
ಲಿಂಗ ✅ ಹೌದು
ಸಂಬಂಧಿಕರ ಹೆಸರು ✅ ಹೌದು
ಮೊಬೈಲ್ ಸಂಖ್ಯೆ ✅ ಹೌದು

 

ಅರ್ಜಿ ಶುಲ್ಕ

ಮತದಾರರ ಗುರುತಿನ ಚೀಟಿ ತಿದ್ದುಪಡಿಗೆ ಯಾವುದೇ ಸರ್ಕಾರಿ ಶುಲ್ಕ ಇರುವುದಿಲ್ಲ.

ಸಂಪೂರ್ಣ ಪ್ರಕ್ರಿಯೆ ಉಚಿತವಾಗಿದೆ.

ಅರ್ಜಿ ಸ್ಥಿತಿ ಪರಿಶೀಲಿಸುವುದು ಹೇಗೆ?

  • Reference Number ಬಳಸಿ ಸ್ಥಿತಿ ಪರಿಶೀಲಿಸಬಹುದು.
  • ಸಾಮಾನ್ಯವಾಗಿ 15–30 ದಿನಗಳಲ್ಲಿ ತಿದ್ದುಪಡಿ ಪೂರ್ಣಗೊಳ್ಳುತ್ತದೆ.
  • ಅನುಮೋದನೆಯ ನಂತರ ಹೊಸ e-EPIC ಅನ್ನು ಡೌನ್‌ಲೋಡ್ ಮಾಡಬಹುದು.

 

ಮತದಾರರ ಗುರುತಿನ ಚೀಟಿಯ ಪ್ರಯೋಜನಗಳು

  • ಮತದಾನ ಮಾಡಲು ಅಗತ್ಯ
  • ಸರ್ಕಾರಿ ಗುರುತಿನ ದಾಖಲೆಯಾಗಿ ಬಳಕೆ
  • ಬ್ಯಾಂಕ್ KYC
  • ಸರ್ಕಾರಿ ಯೋಜನೆಗಳಿಗೆ ಅರ್ಜಿ
  • ವಿಳಾಸ ಮತ್ತು ಗುರುತಿನ ದಾಖಲೆ

ಸಾಮಾನ್ಯ ತಪ್ಪುಗಳು

❌ ಸ್ಪಷ್ಟವಲ್ಲದ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು

❌ ತಪ್ಪಾದ ಮೊಬೈಲ್ ಸಂಖ್ಯೆ ನೀಡುವುದು

❌ ಹಳೆಯ ವಿಳಾಸ ದಾಖಲೆಯನ್ನು ಬಳಸುವುದು

❌ ತಪ್ಪಾದ ಜನ್ಮ ದಿನಾಂಕ ನಮೂದಿಸುವುದು

❌ EPIC ಸಂಖ್ಯೆ ತಪ್ಪಾಗಿ ನಮೂದಿಸುವುದು

 

ಪ್ರಮುಖ ಸಲಹೆಗಳು

  • ಎಲ್ಲಾ ದಾಖಲೆಗಳು ಸ್ಪಷ್ಟವಾಗಿರಲಿ.
  • ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ಜನ್ಮ ದಿನಾಂಕಕ್ಕೆ ಹೊಂದಿಕೆಯಾಗುವಂತೆ ವಿವರಗಳನ್ನು ನಮೂದಿಸಿ.
  • ಅರ್ಜಿ ಸಲ್ಲಿಸಿದ ನಂತರ Reference Number ಅನ್ನು ಉಳಿಸಿಕೊಳ್ಳಿ.
  • ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಿ.

 

FAQ

  1. ಮತದಾರರ ಗುರುತಿನ ಚೀಟಿ ತಿದ್ದುಪಡಿಗೆ ಶುಲ್ಕ ಇದೆಯೇ?

ಇಲ್ಲ. ಇದು ಸಂಪೂರ್ಣ ಉಚಿತ.

  1. ತಿದ್ದುಪಡಿ ಪೂರ್ಣಗೊಳ್ಳಲು ಎಷ್ಟು ಸಮಯ ಬೇಕು?

ಸಾಮಾನ್ಯವಾಗಿ 15–30 ದಿನಗಳು.

  1. ವಿಳಾಸವನ್ನು ಆನ್‌ಲೈನ್‌ನಲ್ಲಿ ಬದಲಾಯಿಸಬಹುದೇ?

ಹೌದು, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

  1. ಹೆಸರು ಬದಲಾಯಿಸಲು ಯಾವ ದಾಖಲೆ ಬೇಕು?

ಆಧಾರ್ ಕಾರ್ಡ್, ಪಾಸ್‌ಪೋರ್ಟ್, PAN ಕಾರ್ಡ್ ಅಥವಾ SSLC ಪ್ರಮಾಣಪತ್ರ.

  1. ಹೊಸ ಕಾರ್ಡ್ ಸಿಗುತ್ತದೆಯೇ?

ಹೌದು, ತಿದ್ದುಪಡಿ ನಂತರ ಹೊಸ e-EPIC ಲಭ್ಯವಾಗುತ್ತದೆ.

  1. ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬಹುದೇ?

ಹೌದು.

  1. ಫೋಟೋ ಬದಲಾಯಿಸಬಹುದೇ?

ಹೌದು.

  1. ಮದುವೆಯ ನಂತರ ಹೆಸರು ಬದಲಾಯಿಸಬಹುದೇ?

ಹೌದು, ಸಂಬಂಧಿತ ದಾಖಲೆಗಳನ್ನು ಸಲ್ಲಿಸಿ ತಿದ್ದುಪಡಿ ಮಾಡಬಹುದು.

 

ವೋಟರ್ ಐಡಿ ಪರಿಶೀಲನೆ ಮತ್ತು ಡೌನ್‌ಲೋಡ್

Status ಚೆಕ್ ಮಾಡುವ tab

ವಿಶೇಷ ಮಾಹಿತಿ

ಮತದಾರರ ಗುರುತಿನ ಚೀಟಿಯಲ್ಲಿರುವ ಹೆಸರು, ವಿಳಾಸ, ಜನ್ಮ ದಿನಾಂಕ, ಫೋಟೋ ಅಥವಾ ಇತರ ವಿವರಗಳಲ್ಲಿ ಯಾವುದೇ ತಪ್ಪಿದ್ದರೆ ತಕ್ಷಣ ತಿದ್ದುಪಡಿ ಮಾಡಿಸಿಕೊಳ್ಳುವುದು ಉತ್ತಮ. ಸರಿಯಾದ ಮಾಹಿತಿಯಿರುವ ಮತದಾರರ ಗುರುತಿನ ಚೀಟಿ ಚುನಾವಣೆಯಲ್ಲಿ ಮತದಾನ ಮಾಡುವುದಷ್ಟೇ ಅಲ್ಲದೆ, ಹಲವು ಸರ್ಕಾರಿ ಮತ್ತು ಖಾಸಗಿ ಸೇವೆಗಳಲ್ಲಿ ಗುರುತಿನ ದಾಖಲೆಯಾಗಿ ಸಹ ಉಪಯುಕ್ತವಾಗುತ್ತದೆ.

ನೀವು ಈಗ ATM CARD ಥರ IRUVA PVC PLASTIC VOTER ID ಸಹ ಬೇಕಾದರೆ VOTER ID WEBSITE NALLI

APPLY MAADI ಪಡೆಯಬಹುದು ಹತ್ತು ದಿನಗಳಲ್ಲಿ ನಿಮ್ಮ ಮನೆಗೆ POST ಮೂಲಕ ತಲುಪಲಿದೆ.

ಯಾವುದೇ ದೂರುಗಳಿಗಗಾಗಿ ಕೆಳಗೆ ನೀಡಿರುವ MAIL ID ಬಳಸಬಹುದು

 Email

complaints@eci.gov.in

 

ಇ ತರಹದ ಹೆಚ್ಚಿನ ಉಪಯುಕ್ತ ಮತ್ತು ವಿಶ್ವಾಸ ಮಾಹಿತಿಗಾಗಿ ನಮ್ಮ ಪೇಜ್ ವಿಸಿಟ್ ಮಾಡ್ತಾ ಇರಿ. ನಾವು  ಕೇವಲ

ದೃಡೀಕೃತ ವಿಷಯಗಳ ಮಾಹಿತಿಯನ್ನು ಮಾತ್ರ ತಿಳಿಸುತ್ತೇವೆ,… ನಮಸ್ಕಾರ

https://maahitimitra.in